Aadhar update : ಉಚಿತ ಆಧಾರ ಅಪ್ಡೇಟ್ ಕುರಿತು ಮಹತ್ವದ ಆದೇಶ.
ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ. ಉಚಿತ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಕೇಂದ್ರ ಸರ್ಕಾರವು ಜೂನ್ 14 2026 ರವರೆಗೆ ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವೆಲ್ಲ ಅಪ್ಡೇಟ್ ಮಾಡಿಕೊಳ್ಳಬಹುದು. ಮತ್ತು ಹೇಗೆ ಮಾಡಿಕೊಳ್ಳುವುದು ಎಂಬ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ ಲೇಖನವನ್ನು ಸಂಪೂರ್ಣವಾಗಿ ವೀಕ್ಷಿಸಿ.
ಸ್ನೇಹಿತರೆ ಉಚಿತ ಆಧಾರ ನವೀಕರಣ ಸೇವೆಯು my Aadhar ಪೋರ್ಟಲ್ ನಲ್ಲಿ ಲಭ್ಯವಿರುತ್ತದೆ ಇದನ್ನು 2026ರ ಜೂನ್ 14ರ ವರೆಗೂ ವಿಸ್ತರಣೆ ಮಾಡಲಾಗಿದೆ ನಾಗರೀಕರು ತಮ್ಮ ಗುರುತು ಹಾಗೂ ವಿಳಾಸದ ದಾಖಲೆಯನ್ನು ಅಂತರ್ಜಾಲದ ಮುಖಾಂತರವೇ ಅಪ್ಲೋಡ್ ಮಾಡಿ ಆಧಾರ ಕಾರ್ಡ್ ನವೀಕರಣ ಮಾಡಿಕೊಳ್ಳಬೇಕೆಂದು ಯುಐಡಿಎಐ ತಿಳಿಸಲಾಗಿದೆ.
Aadhar update ಉಚಿತವಾಗಿ ಏನು ನವೀಕರಿಸಬಹುದು.
- ಹೆಸರು
- ಜನ್ಮ ದಿನಾಂಕ
- ವಿಳಾಸ
- ಲಿಂಗ
- ಮೊಬೈಲ್ ನಂಬರ್
ಇಮೇಲ್ ಐಡಿ ಸೂಚನೆ, ಫಿಂಗರ್ ಪ್ರಿಂಟ್, ಫೋಟೋ ಅಥವಾ ಐರಿಸ್ ಸ್ಕ್ಯಾನ್ ಅಂತ ಬಯೋಮೆಟ್ರಿಕ್ ವಿವರಗಳಿಗಾಗಿ ನೀವು ನಿಮ್ಮ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
Aadhar update ಮನೆಯಿಂದಲೇ ಆಧಾರ್ ಅನ್ನು ಹೇಗೆ ನವಕರಿಸಬಹುದು.
ಸ್ನೇಹಿತರೆ UIDAI ವೆಬ್ಸೈಟ್ ಅಥವಾ myAadhara ಪೋರ್ಟಲ್ ಗೆ ಮುಖಾಂತರ ಸುಲಭವಾಗಿ ಮಾಡಿಕೊಳ್ಳಬಹುದಾಗಿದೆ.(https://myaadhaar.uidai.gov.in )
Aadhar update ಹಾಗಾದರೆ ಆಧಾರ್ ಕಾರ್ಡ್ ನವೀಕರಣ ಏಕೆ ಅಗತ್ಯವಾಗಿದೆ.
ಸ್ನೇಹಿತರೆ 10 ವರ್ಷ ಹಳೆಯ ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ ನಿಮ್ಮ ಪರಿಶೀಲನೆಯಲ್ಲಿ ಸಮಸ್ಯೆ ಕಂಡು ಬರುತ್ತದೆ ಬ್ಯಾಂಕಿಂಗ್ ಸರ್ಕಾರಿ ಯೋಜನೆಗಳು ಪಾಸ್ಪೋರ್ಟ್ ಪಿಂಚಣಿ ಮುಂತಾದ ಸೇವೆಗಳಲ್ಲಿ ಪುನರಾವರ್ತಿತ ಓಟಿಪಿ ಅಥವಾ ಪರಿಶೀಲನೆ ವೈಫಲ್ಯಕ್ಕೆ ಇದು ಕಾರಣವಾಗಿದೆ ಎನ್ನಬಹುದು ಆದ್ದರಿಂದ ಅಗತ್ಯನ ವಿಕರಣಗಳನ್ನು ಸಮಯಕ್ಕೆ ತಕ್ಕಂತೆ ಮಾಡಬೇಕೆಂದು ಯುಐಡಿಎಐ ಪದೇ ಪದೇ ಸೂಚನೆ ಮಾಡುತ್ತದೆ.